
3rd August 2025
ಪ್ರಪಂಚಕ್ಕೆ ಗೆಳೆತನದ ಮಹತ್ವವನ್ನು ಮೊದಲ ವ್ಯಕ್ತಿ ಎಂದರೆ ಅದು ಶ್ರೀ ಕೃಷ್ಣ ಪರಮಾತ್ಮ. ಬಡವನಾದ ಸುಧಾಮನ ಮನೆಗೆ ಹೋಗಿ ಅವಲಕ್ಕಿ ತಿಂದ. ಪ್ರಪಂಚದಲ್ಲಿರುವ ಅತ್ಯಂತ ಸುಂದರ, ನಿಸ್ವಾರ್ಥ, ನಿಷ್ಕಲ್ಮಶ ಸಂಬಂಧಗಳಲ್ಲಿ ಸ್ನೇಹ ಒಂದು ಶ್ರೇಷ್ಠ ಸಂಬಂಧ.
ಸ್ನೇಹವು ಜಾತಿ, ಮತ, ಪಂಥ, ಬಡವ ಶ್ರೀಮಂತ ಎಂಬ ಗಡಿಯನ್ನು ಮೀರಿದ ಸಂಬಂಧ. ಸ್ನೇಹದಲ್ಲಿ ನಾನು ಎಂಬ ಅಹಂ ಇಲ್ಲ, ನನ್ನದು ಎಂಬ ದುರಾಸೆ ಇಲ್ಲ. ನಾನು ನೀನು ದೋಸ್ತಿ, ಸ್ನೇಹವೇ ನಮ್ಮ ಆಸ್ತಿ ಎಂಬ ಭಾವವಷ್ಟೇ ಸ್ನೇಹಕ್ಕೆ ಅಡಿಪಾಯ. ಇಂತಹ ಸುಂದರ ಸಂಬಂಧವನ್ನು ಸಂಭ್ರಮಿಸಲೂ ಒಂದು ದಿನವಿದೆ. ಈ ದಿನವನ್ನು ಫ್ರೆಂಡ್ಶಿಪ್ ಡೇ ಎಂದು ಕರೆಯುತ್ತಾರೆ.
ಸ್ನೇಹಿತರು ಜೊತೆಗಿದ್ದಾಗ ನಾವು ಸುಂದರ ಪ್ರಪಂಚದ ವಿಹಾರಿಗಳು... ಫ್ರೆಂಡ್ಸ್ ಜೊತೆ ನಗುತ್ತೇವೆ, ಫ್ರೆಂಡ್ಸ್ ಜೊತೆ ಅಳುತ್ತೇವೆ, ಫ್ರೆಂಡ್ಸ್ ಜೊತೆ ಜಗಳವಾಡಿ ಒಂದಾಗುತ್ತೇವೆ, ಪ್ರತಿ ಕ್ಷಣವನ್ನೂ ಆನಂದಿಸುತ್ತೇವೆ. ಜಗಳಾಡಿದರೂ ಇಲ್ಲಿ ಪ್ರೀತಿಯಂತು ಕಡಿಮೆಯಾಗದು. ಇದೇ ಕಾರಣಕ್ಕೆ ಸ್ನೇಹವನ್ನು ಮಧುರ ಬಂಧ ಎನ್ನುವುದು.
ಸ್ನೇಹಿತರ ದಿನಾಚರಣೆಯನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ವರ್ಷ, ಆಗಸ್ಟ್ 3 ರಂದು ಸ್ನೇಹಿತರ ದಿನ.
2011ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇಂಟರ್ನ್ಯಾಷನಲ್ ಡೇ ಆಫ್ ಫ್ರೆಂಡ್ಶಿಪ್ ಅನ್ನು ಘೋಷಿಸಿತ್ತು. ವಿಶ್ವಸಂಸ್ಥೆಯು ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಅಂದಿನಿಂದ ಕೆಲವು ದೇಶಗಳಲ್ಲಿ ಜುಲೈ 30 ರಂದು ಸ್ನೇಹಿತರ ದಿನವನ್ನು ಆಚರಿಸುತ್ತವೆ.
1935ರಲ್ಲಿ, ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನ ಎಂದು ಗೊತ್ತುಪಡಿಸಿತು, ಸ್ನೇಹ ಬಂಧದ ಮಹತ್ವವನ್ನು ಮತ್ತಷ್ಟು ಒತ್ತಿಹೇಳಿತು ಎಂದೂ ಹೇಳಲಾಗುತ್ತದೆ.
ಹೀಗೆ ಸ್ನೇಹಿತರ ದಿನಕ್ಕೆ ಒಂದೊಂದು ಇತಿಹಾಸವಿದೆ.
ಅಲ್ಲದೇ ಅನೇಕ ದೇಶಗಳು ವಿಭಿನ್ನ ದಿನಾಂಕಗಳಲ್ಲಿ ಫ್ರೆಂಡ್ಶಿಪ್ ಡೇ ಅನ್ನು ಆಚರಿಸಲು ಪ್ರಾರಂಭಿಸಿದವು. .
ಗೆಳೆಯರ ದಿನಾಚರಣೆ, ಅಂದರೆ ಸ್ನೇಹಿತರ ದಿನ, ಪ್ರಪಂಚದಾದ್ಯಂತ ಆಚರಿಸಲಾಗುವ ಒಂದು ವಿಶೇಷ ದಿನ. ಈ ದಿನವನ್ನು ಸ್ನೇಹಿತರ ನಡುವಿನ ಬಾಂಧವ್ಯವನ್ನು ಗೌರವಿಸಲು ಮತ್ತು ಆಚರಿಸಲು ಮೀಸಲಿಡಲಾಗಿದೆ.
ಭಾರತದಲ್ಲಿ, ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ದಿನ, ಸ್ನೇಹಿತರು ಪರಸ್ಪರ ಉಡುಗೊರೆಗಳನ್ನು ನೀಡುವುದು, ಸಂದೇಶಗಳನ್ನು ಕಳುಹಿಸುವುದು, ಮತ್ತು ಒಟ್ಟಿಗೆ ಸಮಯ ಕಳೆಯುವ ಮೂಲಕ ಸಂಭ್ರಮಿಸುತ್ತಾರೆ. ಸ್ನೇಹಿತರ ದಿನವು ಜನರಿಗೆ ತಮ್ಮ ಜೀವನದಲ್ಲಿನ ಸ್ನೇಹ ಹಾಗೂ ಸ್ನೇಹಿತರನ್ನು ಗೌರವಿಸಲು ಅವಕಾಶವನ್ನು ನೀಡುತ್ತದೆ ಮತ್ತು ಪರಸ್ಪರ ಬಾಂಧವ್ಯವನ್ನು ಬೆಳೆಸುವ ಸಂಬಂಧಗಳನ್ನು ನಿರ್ಮಿಸಲು ಉತ್ತೇಜಿಸುತ್ತದೆ. ಅಲ್ಲದೆ ಈ ದಿನ ಹಳೆಯ ಸ್ನೇಹಿತರೊಂದಿಗೆ ಮತ್ತೆ ಬೆರೆಯಲು, ಸಂಬಂಧಗಳನ್ನು ಸರಿಪಡಿಸಲು, ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಲು, ಒಂದೊಳ್ಳೆ ಅವಕಾಶವಾಗಿದೆ. ಈ ದಿನ ನೀವು ಸ್ನೇಹಿತರನ್ನು ಭೇಟಿಯಾಗಬಹುದು, ಹಳೆಯ ಸ್ನೇಹಿತರೊಂದಿಗೆ ಮತ್ತೆ ಸೇರಬಹುದು. ಗಿಫ್ಟ್ಗಳನ್ನು ನೀಡಬಹುದು. ಇಲ್ಲವೆ ಮೂವಿ, ಪ್ರವಾಸಕ್ಕೆ ಹೋಗುವ ಮೂಲಕ ಸ್ನೇಹಿತರ ದಿನವನ್ನು ಸ್ಮರಣೀಯವಾಗಿ ಆಚರಿಸಬಹುದು.
ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಸ್ನೇಹಿತರು ನಮಗಾಗಿ ಜೀವ ಕೊಡಲು ಸಿದ್ಧರಿರುತ್ತಾರೆ. ಯಾವುದೇ ಪ್ರತಿಫಲ ನಿರೀಕ್ಷಿಸದೇ ಜಾತಿ, ಧರ್ಮ ನೋಡದೆ ನಮ್ಮೊಂದಿಗೆ ಇರುವ ಒಂದು ಸುಂದರ ಸಂಬಂಧ ಸ್ನೇಹ. ಇಂತಹ ಸುಮಧರ ಸಂಬಂಧವನ್ನು ಸ್ಮರಿಸುವ ದಿನ ಇದಾಗಿದೆ. ಸ್ನೇಹವನ್ನು ಗೌರವಿಸುವ ದಿನವೂ ಹೌದು. ಕೃಷ್ಣ-ಕುಚೇಲ ಸೇರಿದಂತೆ ಜಗತ್ತಿನ ಸಾಕಷ್ಟು ಸುಂದರ ಸ್ನೇಹ ಸಂಬಂಧಗಳನ್ನು ನೆನಪಿಸುವ ದಿನವೂ ಇದಾಗಿದೆ.
(ಸ್ನೇಹಿತರ ದಿನಾಚರಣೆ ಪ್ರಯುಕ್ತ ಈ ಲೇಖನ )
ಕೊಪ್ಪಳ ಖಾದಿ ಉತ್ಸವ ಮೂರು ದಿನದಲ್ಲಿ ಏಳು ಸಾವಿರ ಜನ ಭೇಟಿ:21.84 ಲಕ್ಷ ವಸ್ತುಗಳು ಮಾರಾಟ